ನಮ್ಮ ಬಗ್ಗೆಸೇವೆಗಳುಸಂಪರ್ಕ

ನಾವು ಪ್ರತಿಯೊಂದು ಕಾರ್ಯಕ್ರಮದಲ್ಲಿ ಮಾಡುವಂತಹ ಪೂಜಾ ವಿಧಾನ


ಕುಲದೇವತಾ ಪ್ರಾರ್ಥನೆ

ಪರಂಪರಾಗತವಾಗಿ ನಾವು ನಂಬಿ ಪೂಜಿಸಿಕೊಂಡು ಬಂದಂತಹ ದೇವರ ಅನುಜ್ನೆಗಾಗಿ ಫಲಸಮರ್ಪಣೆಯೊಂದಿಗೆ ಪ್ರಾರ್ಥನೆ ಮಾಡುವಂತಹದ್ದು.

ಗಣಪತಿ ಪೂಜೆ

ಸಂಕಲ್ಪಿಸಿದ ಪೂಜೆಯ ನಿರ್ವಿಘ್ನತೆಗೋಸ್ಕರ ಮತ್ತು ಎಲ್ಲಾ ಕಾರ್ಯದಲ್ಲಿಯು ಜಯ ಪ್ರಾಪ್ತಿಯಾಗಲೆಂದು ಮಾಡುವಂತಹ ಮೊದಲ ಪೂಜೆ.

ಪುಣ್ಯಾಹವಾಚನೆ

ಕಾಲ, ದ್ರವ್ಯ, ಸ್ಥಳ, ಆತ್ಮದ ಶುದ್ಧಿಗೋಸ್ಕರವಾಗಿ ವೇದಮಂತ್ರಗಳಿಂದ ಅಭಿಮಂತ್ರಿತವಾದ ತೀರ್ಥದ ಪ್ರೋಕ್ಷಣೆ ಮತ್ತು ಪ್ರಾಶನ.

ಮಹಾ ಸಂಕಲ್ಪ

ನಮ್ಮ ಗೋತ್ರ, ನಕ್ಷತ್ರ, ನಾಮಧೇಯಗಳ ಸವಿವರದೊ೦ದಿಗೆ ಮಾಡುವ ಪೂಜೆಯ ಉದ್ದೇಶಾದಿಗಳನ್ನು ಭಗವ೦ತನಲ್ಲಿ ಭಿನ್ನವಿಸುವುದು.

ಋತ್ವಿಗ್ವರಣ೦

ಪೂಜೆಯ ವಿಧಿವಿಧಾನಗಳನ್ನು ತಿಳಿದಂತಹ ಪೂರೋಹಿತರಲ್ಲಿ ಸಂಕಲ್ಪಿಸಿದ ಕಾರ್ಯಕ್ರಮವನ್ನು ಶಾಸ್ತ್ರೋಕ್ತವಾಗಿ ಮಾಡಿಕೊಡುವಂತೆ ಪ್ರಾರ್ಥಿಸುವುದು.

ಯಂತ್ರಾರಾಧನೆ

ದೇವತಾ ಸಾನ್ನಿಧ್ಯಕ್ಕೋಸ್ಕರವಾಗಿ ನಿರ್ದಿಶ್ಟವಾದ ವರ್ಣಗಳ ಸಂಯೋಜನೆಯಿಂದ ರಚಿಸಲ್ಪಟ್ಟ ಮಂಡಲದಲ್ಲಿ ತತ್ಸಂಬಂಧವಾದ ದೇವತೆಗಳ ಆವಾಹನೆ.

ಕಲಶಸ್ಥಾಪನೆ

ಸಂಕಲ್ಪಿಸಿದ ಪೂಜೆಗೋಸ್ಕರವಾಗಿ ದೇವತೆಗಳನ್ನು ಮಂತ್ರಮುಖೇನ ಕಲಶದಲ್ಲಿ ಆಹ್ವಾನಿಸಿ ಪೂಜಿಸುವುದು.

ಹವನ ಮತ್ತು ಪೂರ್ಣಾಹುತಿ

”ಅಗ್ನಿಮುಖಾವ್ಯೆ ದೇವಾಹ” ಎಂಬ ಶ್ರುತಿ ವಚನದಂತೆ ಆಹ್ವಾನಿಸಿದ ದೇವತೆಗಳಿಗೆ ಪ್ರಿಯವಾದಂತಹ ದ್ರವ್ಯಗಳನ್ನು ಅಗ್ನಿ ಮುಖಾಂತರ ಸಮರ್ಪಿಸುವುದು ಹಾಗೂ ಹವನದ ಸಂಪೂರ್ಣತೆಗೋಸ್ಕರವಾಗಿ ಮತ್ತು ಉದ್ದೇಶದ ಸಾಫಲ್ಯತೆಗೋಸ್ಕರವಾಗಿ "ಅಗ್ನಿದೇವ” ನಿಗೆ ಸಮರ್ಪಿಸುವ ಮಹಾಹುತಿ.

ಮಹಾಮಂಗಳಾರತಿ

ಭಗವಂತನಿಗೆ ನೈವೇದ್ಯಾದಿಗಳನ್ನು ಸಮರ್ಪಿಸಿ ಮಂಗಳವಾದ್ಯಗಳೊಂದಿಗೆ ನೀರಾಜನೆ ಮಾಡುವಂತಹದ್ದು.

ಗೃಹ ಪ್ರವೇಶ
ಗಣಪತಿ ಹವನ
ಮದುವೆ ಸಮಾರಂಭ
ನವಗ್ರಹ ಹೋಮ
ಸುದರ್ಶನ ಹವನ
ಮೃತ್ಯು೦ಜಯ ಹವನ
ಇತರೆ ಪೂಜೆ
ಇತರೆ ಹೋಮ
ಇತರೆ ಶಾಂತಿ
ನಾವು ನೂತನವಾಗಿ ನಿರ್ಮಿಸಿದ [ಕರೀದಿಸಿದ] ಮನೆಯಲ್ಲಿ ದುಷ್ಟಶಕ್ತಿಗಳ ನಿವಾರಣೆಗಾಗಿ ಶಿಷ್ಠ ದೇವತೆಗಳ ಸಾನ್ನಿಧ್ಯ ಹಾಗೂ ಸುಖ ನಿವಾಸಕ್ಕೋಸ್ಕರ ಮಾಡುವ ದೇವತಾ ಕಾರ್ಯಕ್ರಮ

ರಾತ್ರಿ ಮಾಡುವಂತಹ ಕಾರ್ಯಕ್ರಮಗಳು
1. ರಾಕ್ಷೋಘ್ನ ಹವನ 2. ಅಘೋರಾಸ್ತ್ರ ಹವನ
3. ವಾಸ್ತು ಹವನ 4. ದಿಕ್ಪಾಲಕ ಬಲಿ ಹರಣ

ಮಾರನೆಯ ದಿನ ಬೆಳಿಗ್ಗೆ
1. ಗಂಗಾ ಪೂಜೆ 2. ಗೋ ಪೂಜೆ
3. ವಾಸ್ತು ಪೂಜೆ, ಗೃಹ ಪ್ರವೇಶ 4. ಹಾಲು ಉಕ್ಕಿಸುವುದು
5. ಕುಲದೇವತಾ ಸ್ತಾಪನೆ(ಮನೆ ದೇವರ ಪೂಜೆ) 6. ನವಗ್ರಹ ಹೊಮ
7. ಗಣಪತಿ ಹೋಮ 8. ಸತ್ಯನಾರಾಯಣ ಪೂಜೆ
”ಶ್ರೇಯಾಂಸಿ ಬಹು ವಿಘ್ಹ್ನಾನಿ” ಎಂಬ ಉಕ್ತಿಯ೦ತೆ ನಮ್ಮ ಎಲ್ಲಾ ಕಾರ್ಯದಲ್ಲಿ ವಿಘ್ನಉಂಟಾಗುವುದು ಸಹಜ. ಅಂತಹ ವಿಘ್ನಗಳನ್ನು ದೂರೀಕರಿಸಿ ನಮ್ಮ ಕಾರ್ಯಗಳಲ್ಲಿ ಜಯವನ್ನು, ಕೀರ್ತಿಯನ್ನು, ಪಡೆಯಲು ಗಣಪತಿಯ ಅನುಗ್ರಹಕ್ಕೋಸ್ಕರ ಮಾಡುವ ಹವನ.
ಮದುವೆ ಎಂಬುದು ಬರಿ ಏಳು ಹೆಜ್ಜೆಯಲ್ಲ ಪ್ರತಿ ಹೆಜ್ಜೆಯ ಏಳು ಬೀಳುಗಳಲ್ಲು ಬೆಸೆದಂತಹ ಸಂಬಂಧ. ನವ ದಂಪತಿಗಳ ಜೀವನದಲ್ಲಿ ಹರ್ಷ ಮತ್ತು ಸಮೃದ್ಧಿ ತುಂಬಿರಲೆಂದು ಹಾಗೂ ಉನ್ನತ ಮಟ್ಟದ ಜೀವನದ ಪ್ರಾರಂಭಕ್ಕೆ ನಾಂದಿ ಹಾಡುವ ಕಾರ್ಯ ರೂಪ
"ದೇವತಾಗ್ರಹ ರೊಪೇಣ ದರ್ಶಯಂತಿ ಶುಭಾಶುಭಂ” ಎಂಬ ಉಕ್ತಿಯಂತೆ ದೇವತೆಗಳು ಶುಭಾಶುಭ ಪಲಗಳನ್ನು ಮನುಷ್ಯರಿಗೆ ನೀಡುವುದು ಆದಿತ್ಯಾದಿ ನವಗ್ರಹಗಳ ಮುಖಾಂತರವೆ ಆಗಿರುತ್ತದೆ. ಅಲ್ಲದೆ ಗ್ರಹಗಳ ಚಲನೆಗೆ ಅನುಗುಣವಾಗಿ ಪ್ರತ್ಯಕ್ಷ ಹಾಗೂ ಪರೋಕ್ಷವಾದ ಪರಿಣಾಮವು ಮನುಷ್ಯನ ಮೇಲೆ ಉಂಟಾಗುತ್ತದೆ.
ವಿವಿಧ ಗ್ರಹಗಳ ಪ್ರಭಾವಗಳು
೧). ಸೂರ್ಯಗ್ರಹ ----- ಆರೋಗ್ಯ, ತೇಜಸ್ಸು, ಕಾಂತಿಗಳ ಕಾರಕ.
೨). ಚ೦ದ್ರಗ್ರಹ ----- ಮನಸ್ಸು, ಸೌಂದರ್ಯ, ಏಕಾಗ್ರತೆಗಳ ಕಾರಕ.
೩). ಕುಜಗ್ರಹ ----- ಭೂಮಿ, ರಕ್ತ, ಮಾಂಗಲ್ಯಗಳ ಕಾರಕ.
೪). ಬುಧಗ್ರಹ ----- ವಿದ್ಯ, ಬುದ್ಧಿ, ವಾಕ್ ಚಾತುರ್ಯಗಳ ಕಾರಕ.
೫). ಗುರುಗ್ರಹ ----- ಜ್ನಾನ, ಸೌಭಾಗ್ಯ, ಸಂತಾನಗಳ ಕಾರಕ.
೬). ಶುಕ್ರಗ್ರಹ ----- ಐಶ್ವರ್ಯ, ವಿವಾಹ, ದಾಂಪತ್ಯಸುಖಗಳ ಕಾರಕ.
೭). ಶನಿಗ್ರಹ ----- ಆಯುಷ್ಯ,ಜೀವನೋಪಾಯ, ವೃತ್ತಿಗಳ ಕಾರಕ.
೮). ರಾಹುಗ್ರಹ ----- ಧೈರ್ಯ, ಬಾಹುಬಲ, ಸರ್ಪದೋಷಗಳ ಕಾರಕ.
೯). ಕೇತುಗ್ರಹ ----- ಮೋಕ್ಷ, ಕೀರ್ತಿ, ಕುಲದ ಉನ್ನತಿಗಳ ಕಾರಕ.
ಎಲ್ಲಾ ವಿಧವಾದ ಶತ್ರುಬಾಧೆ, ದೃಷ್ಟಿದೋಷ, ಮಾಟಮಂತ್ರಾದಿ ಕೃತ್ರಿಮ ಪ್ರಯೋಗಗಳ ನಿವಾರಣೆಗೆ ಮತ್ತು ಗೃಹ, ಯಂತ್ರಾಗಾರ, ಉದ್ಯೋಗ ವ್ಯವಹಾರಾದಿ ಸ್ಥಳಗಳಲ್ಲಿ ರಕ್ಷಣೆಗಾಗಿ ಹಾಗು ಐಶ್ವರ್ಯ ಅಭ್ಯುದಯಾದಿಗಳ ಪ್ರಾಪ್ತಿಗಾಗಿ ಮಾಡತಕ್ಕಂತಹ ಮಹಾ ವಿಷ್ಣುವಿನ ಆರಾಧನೆ.
ಎಲ್ಲಾ ವಿಧವಾದಂತಹ ರೋಗಬಾಧೆ, ಅಪಮೃತ್ಯು, ಬಾಲಗ್ರಹದೋಷಗಳ ಪರಿಹಾರಕ್ಕೆ ಮಾಡುವಂತಹ ಹವನ.
1. ಆಶ್ಲೇಷ ಬಲಿ ಪೂಜೆ
2. ಸುಬ್ರಮಣ್ಯ ಪೂಜೆ
3. ಸರಸ್ವತಿ ಪೂಜೆ
4. ಮಹಾಲಕ್ಷ್ಮೀ ಪೂಜೆ
01. ಆಯುಷ್ಯ ಹೋಮ
02. ಸರ್ಪಸೂಕ್ತ ಹೋಮ
03. ರುದ್ರ ಹೋಮ
04. ನಕ್ಷತ್ರ ಹೋಮ
05. ಪುರುಷಸೂಕ್ತ ಹೋಮ
06. ಪವಮಾನ ಹೋಮ
07. ನರಸಿಂಹ ಹೋಮ
08. ಧನ್ವಂತರಿ ಹೋಮ
09. ಲಕ್ಶ್ಮಿ ನಾರಾಯಣ ಹೃದಯ ಹೋಮ
10. ಚಂಡಿಕಾ ಹೋಮ
11. ದುರ್ಗಾ ಹೋಮ
12. ಶ್ರೀ ಸೂಕ್ತ ಹೋಮ
13. ಲಲಿತಾ ಸಹಸ್ರನಾಮ ಹೋಮ
1. ವಿಷ್ಣು ಸಹಸ್ರನಾಮ ಶಾಂತಿ
2. ಶಷ್ಟ್ಯಬ್ದಪೂರ್ತಿ ಶಾಂತಿ (60 ವರ್ಷದ ಶಾಂತಿ)
3. ಭೀಮ ರತ ಶಾಂತಿ (70 ವರ್ಷದ ಶಾಂತಿ)
4. ಶತಾಬಿಶೇಖಂ ಶಾಂತಿ (80 ವರ್ಷದ ಶಾಂತಿ)
5. ರಾಹು ಬೃಹಸ್ಪತಿ ಸಂಧಿ ಶಾಂತಿ
6. ಕುಜ ರಾಹು ಸಂಧಿ ಶಾಂತಿ
7. ಶತ್ರುದಿತ್ಯ ಸಂಧಿ ಶಾಂತಿ
8. ವಿನಾಯಕ ಶಾಂತಿ
9. ಕುಜ ಶಾಂತಿ